ನಿಚ್ಚಪ್ರಸಾದ ಅಚಲನಿರ್ವಯಲಕ್ಕೆ ಪೆಸರು.
ಅಚ್ಚಪ್ರಸಾದ ಅಚಲ-ಅದ್ವಯ-ಅಭಿನ್ನ-ಅಪ್ರಮಾಣಕ್ಕೆ ಪೆಸರು.
ಈ ಉಭಯಸಂಬಂಧವೆ ಸಮಯವೆನಿಸುವುದು.
ಆ ಸಮಯಪ್ರಸಾದವೆ ಸಚ್ಚಿದಾನಂದ, ಸಮ್ಯಜ್ಞಾನ,
ಸತ್ಕ್ರಿಯಾ ಸದಮಲಾನಂದಕ್ಕೆ ಪೆಸರು.
ಈ ವಿಚಾರವ ಶ್ರುತಿ-ಗುರು-ಸ್ವಾನುಭಾವದಿಂದರಿದು
ಈ ತ್ರಿವಿಧಪ್ರಸಾದವ ಭೋಗಿಸುವ ಶರಣನೆ ನಿಜಪ್ರಸಾದ ನೋಡ.
ಈ ಚತುರ್ವಿಧಪ್ರಸಾದವ ಭೋಗಿಸಬಲ್ಲಾತನೆ
ಸದ್ಗುರುಲಿಂಗಜಂಗಮ ಸ್ವರೂಪು.
ಈ ಸ್ವಸ್ವರೂಪದಿಂದ ಪಡದನುಭವಿಸಬಲ್ಲಾತನೆ
ಆದಿಪ್ರಸಾದಿ, ಅಂತ್ಯಪ್ರಾದಿ, ಸೇವ್ಯಪ್ರಸಾದಿ,
ಮಹಾನಿಜಪ್ರಸಾದಿ ನೋಡ.
ಈತನೆ ಪಿಂಡಬ್ರಹ್ಮಾಂಡ ಸಕಲಲೋಕಂಗಳಿಗೆ, ಸಕಲತತ್ವಂಗಳಿಗೆ
ಸಕಲಾಗಮಶಾಸ್ತ್ರಂಗಳಿಗೆ, ಏಕಮೇವಪರಬ್ರಹ್ಮ ಸ್ವರೂಪ ನೋಡ.
ಅವರಾರಾರೆಂದಡೆ : ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು,
ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ ಮುಖ್ಯವಾದ
ಅಸಂಖ್ಯಾತಮಹಾಗಣಂಗಳು ನೋಡಾ,
ಸಂಗನಬಸವೇಶ್ವರ.
Art
Manuscript
Music
Courtesy:
Transliteration
Niccaprasāda acalanirvayalakke pesaru.
Accaprasāda acala-advaya-abhinna-apramāṇakke pesaru.
Ī ubhayasambandhave samayavenisuvudu.
Ā samayaprasādave saccidānanda, samyajñāna,
satkriyā sadamalānandakke pesaru.
Ī vicārava śruti-guru-svānubhāvadindaridu
ī trividhaprasādava bhōgisuva śaraṇane nijaprasāda nōḍa.
Ī caturvidhaprasādava bhōgisaballātane
sadguruliṅgajaṅgama svarūpu.
Ī svasvarūpadinda paḍadanubhavisaballātane
ādiprasādi, antyaprādi, sēvyaprasādi,
mahānijaprasādi nōḍa.
Ītane piṇḍabrahmāṇḍa sakalalōkaṅgaḷige, sakalatatvaṅgaḷige
sakalāgamaśāstraṅgaḷige, ēkamēvaparabrahma svarūpa nōḍa.
Avarārārendaḍe: Basavaṇṇa, cannabasavaṇṇa, prabhudēvaru,
maruḷaśaṅkara, sid'dharāmayya, ajagaṇṇa mukhyavāda
asaṅkhyātamahāgaṇaṅgaḷu nōḍā,
saṅganabasavēśvara.