ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮರುಳಶಂಕರ,
ಸಿದ್ಧರಾಮಯ್ಯ, ಅಜಗಣ್ಣ, ಅಕ್ಕನಾಗಲೆ, ನೀಲಲೋಚನೆ, ಮುಕ್ತಾಂಗನೆ,
ಮಹಾದೇವಿಯಕ್ಕ
ಮೊದಲಾದ ಮಹಾಪ್ರಮಥಗಣಂಗಳೆಲ್ಲ.
ಸುಗಂಧದೊಳಗಣ ಮಹಾಗಂಧಪ್ರಸಾದವ ಕೊಂಡರಯ್ಯ.
ಸುರಸದೊಳಗಣ ಮಹಾರಸಪ್ರಸಾದವ ಕೊಂಡರಯ್ಯ.
ಸುರೂಪಿನೊಳಗಣ ಮಹಾರೂಪಪ್ರಸಾದವ ಕೊಂಡರಯ್ಯ.
ಸುಸ್ಪರ್ಶನದೊಳಗಣ ಮಹಾಸ್ಪರ್ಶನಪ್ರಸಾದವ ಕೊಂಡರಯ್ಯ.
ಸುಶಬ್ದದೊಳಗಣ ಮಹಾಶಬ್ದಪ್ರಸಾದವ ಕೊಂಡರಯ್ಯ.
ಇಂತೀ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ, ಸುಶಬ್ದವ
ಸತ್ತುಚಿತ್ತಾನಂದಮೂರ್ತಿ ಶ್ರೀಗುರುಲಿಂಗಜಂಗಮಕ್ಕೆ
ಪವಿತ್ರಮುಖದಿಂದ ಸಮರ್ಪಿಸಿ,
ಅವರೊಕ್ಕುಮಿಕ್ಕ ಮಹಾಪ್ರಸಾದವ ಹಾರೈಸಿ,
ಪರತತ್ವಲಿಂಗಮುಖದಲ್ಲಿ ನಿಜಪ್ರಸಾದವೆಂದು ಸಂಬಂಧಿಸಿ,
ನಿರಾವಯ ಸಮಾಧ್ಯಸ್ತರಾದರು ನೋಡ.
ಅಂದಿನ ಮಹಾಗಣಂಗಳ ಚಿತ್ಪ್ರಭೆಯೆ
ಇಂದಿನ ಗುರುಲಿಂಗಜಂಗಮ ಪಾದೋದಕ ಪ್ರಸಾದವೆಂದು
ನಿರ್ವಂಚಕತ್ವದಿಂದ ಪ್ರಸಾದದೊಳಗಣ ಮಹಾಪ್ರಸಾದವೆಂದರಿದು
ಆಚರಿಸುವ ನಿತ್ಯತೃಪ್ತಿಯೆ ಘನಪ್ರಸಾದ !
ಆ ಪ್ರಸಾದವೆ ಪರಮಾನಂದ !
ಈ ವಿಚಾರವನರಿದು ಕೊಂಡು ಕೊಡಬಲ್ಲಾತನೆ
ಸದ್ಗುರುಲಿಂಗ-ಜಂಗಮ-ಪಾದೋದಕ-ಪ್ರಸಾದ !
ಈ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದವನರಿದು,
ಕೊಳಬಲ್ಲಾತನೆ ಸದ್ಭಕ್ತ-ಪ್ರಸಾದಿ-ಶಿವಶರಣ ನೋಡ.
ಈ ವಿಚಾರವನರಿಯದೆ ಕೊಟ್ಟು ಕೊಂಬ ಭ್ರಷ್ಟರನೇನೆಂಬೆನಯ್ಯ !
ಆದಿ-ಅನಾದಿಯಿಂದತ್ತತ್ತ ಮೀರಿ ತೋರುವ
ಸದ್ಗುರುಲಿಂಗಜಂಗಮದಿಂದ
ಸದ್ಗುರು, ಲಿಂಗ, ಜಂಗಮ, ಭಕ್ತ, ಪ್ರಸಾದಿ,
ಶರಣತ್ವದ ವಿಚಾರವ ತಿಳಿದ
ಮಹಾಗಣಂಗಳಿಗೆ ಸೂತಕ, ಪಾತಕ, ದರಿದ್ರ, ದುಃಖಂಗಳು
ಬಂದು ತಟ್ಟಲುಂಟೆ?
ಅಗ್ನಿಯಲ್ಲಿ ದಗ್ಧವಾದ ಕಾಷ್ಠಂಗಳಿಗೆ ಮರಳಿ ಅಗ್ನಿ ಉಂಟೆ?
ಕ್ಷೀರವಳಿದು ಘೃತವಾದ ಮೇಲೆ ಮರಳಿ ಕ್ಷೀರವಪ್ಪುದೆ?
ಜ್ಯೋತಿಯಲ್ಲಿ ಬಯಲಾದ ಘನಸಾರ ಮರಳಿ ಸಾಕಾರವಪ್ಪುದೆ?
ಸರ್ವಾವಸ್ಥೆಯಲ್ಲಿ ಪರತತ್ವಮೂರ್ತಿಯಲ್ಲಿ ಕೂಡಿದ
ಸದ್ಭಕ್ತನು ಮರಳಿ ಭವಿಯಪ್ಪನೆ?
ಜಾತಿ-ಸೂತಕ-ಪಾತಕವಳಿದ ಸದ್ಭಕ್ತಶರಣಗಣಂಗಳ
ಭಾವ-ಮನ-ದೃಷ್ಟಿ-ಅವಸ್ಥೆಗಳೆಲ್ಲ ಪರಶಿವಲಿಂಗಪ್ರಕಾಶ ನೋಡ.
ಅಂದು-ಇಂದು ಎಂಬ ಸಂದೇಹವನಳಿದು,
ಶ್ರುತಿ-ಗುರು-ಸ್ವಾನುಭಾವದಿಂದ
ಅಂಗಲಿಂಗವೆಂಬ ಉಭಯಭಾವವಳಿದು,
ತ್ರಿವಿಧದೀಕ್ಷೆ, ತ್ರಿವಿಧಸ್ವಸ್ವರೂಪು ನಿಲುಗಡೆ,
ತ್ರಿವಿಧಿ ಚಿದ್ವಿಭೂತಿ-ರುದ್ರಾಕ್ಷಿ-ಮಂತ್ರ,
ತ್ರಿವಿಧಾಚಾರ ಭಕ್ತಿ-ಜ್ಞಾನ-ವೈರಾಗ್ಯವಿಡಿದಾಚರಿಸುವ
ಭಕ್ತಗಣಂಗಳ ಕಾಯವೆ ಚಿತ್ಕಾಯ.
ಅವರಂಗ-ಮನ-ಪ್ರಾಣ-ಭಾವಂಗಳೆ
ಮಹಾಘನನಿಜಪ್ರಸಾದ ಪಾದೋದಕ ನೋಡಾ,
ಸಂಗನಬಸವೇಶ್ವರ
Art
Manuscript
Music
Courtesy:
Transliteration
Basavaṇṇa, cennabasavaṇṇa, prabhudēvaru, maruḷaśaṅkara,
sid'dharāmayya, ajagaṇṇa, akkanāgale, nīlalōcane, muktāṅgane,
mahādēviyakka
modalāda mahāpramathagaṇaṅgaḷella.
Sugandhadoḷagaṇa mahāgandhaprasādava koṇḍarayya.
Surasadoḷagaṇa mahārasaprasādava koṇḍarayya.
Surūpinoḷagaṇa mahārūpaprasādava koṇḍarayya.
Susparśanadoḷagaṇa mahāsparśanaprasādava koṇḍarayya.
Suśabdadoḷagaṇa mahāśabdaprasādava koṇḍarayya.
Intī sugandha, surasa, surūpu, susparśana, suśabdava
sattucittānandamūrti śrīguruliṅgajaṅgamakke
pavitramukhadinda samarpisi,
avarokkumikka mahāprasādava hāraisi,
Paratatvaliṅgamukhadalli nijaprasādavendu sambandhisi,
nirāvaya samādhyastarādaru nōḍa.
Andina mahāgaṇaṅgaḷa citprabheye
indina guruliṅgajaṅgama pādōdaka prasādavendu
nirvan̄cakatvadinda prasādadoḷagaṇa mahāprasādavendaridu
ācarisuva nityatr̥ptiye ghanaprasāda!
Ā prasādave paramānanda!
Ī vicāravanaridu koṇḍu koḍaballātane
sadguruliṅga-jaṅgama-pādōdaka-prasāda!
Ī guru-liṅga-jaṅgama-pādōdaka-prasādavanaridu,
koḷaballātane sadbhakta-prasādi-śivaśaraṇa nōḍa.
Ī vicāravanariyade koṭṭu komba bhraṣṭaranēnembenayya!
Ādi-anādiyindattatta mīri tōruva
sadguruliṅgajaṅgamadinda
sadguru, liṅga, jaṅgama, bhakta, prasādi,
śaraṇatvada vicārava tiḷida
mahāgaṇaṅgaḷige sūtaka, pātaka, daridra, duḥkhaṅgaḷu
bandu taṭṭaluṇṭe?
Agniyalli dagdhavāda kāṣṭhaṅgaḷige maraḷi agni uṇṭe?
Kṣīravaḷidu ghr̥tavāda mēle maraḷi kṣīravappude?
Jyōtiyalli bayalāda ghanasāra maraḷi sākāravappude?
Sarvāvastheyalli paratatvamūrtiyalli kūḍida
sadbhaktanu maraḷi bhaviyappane?
Jāti-sūtaka-pātakavaḷida sadbhaktaśaraṇagaṇaṅgaḷa
bhāva-mana-dr̥ṣṭi-avasthegaḷella paraśivaliṅgaprakāśa nōḍa.Andu-indu emba sandēhavanaḷidu,
śruti-guru-svānubhāvadinda
aṅgaliṅgavemba ubhayabhāvavaḷidu,
trividhadīkṣe, trividhasvasvarūpu nilugaḍe,
trividhi cidvibhūti-rudrākṣi-mantra,
trividhācāra bhakti-jñāna-vairāgyaviḍidācarisuva
bhaktagaṇaṅgaḷa kāyave citkāya.
Avaraṅga-mana-prāṇa-bhāvaṅgaḷe
mahāghananijaprasāda pādōdaka nōḍā,
saṅganabasavēśvara