Index   ವಚನ - 45    Search  
 
ಇಂದ್ರಿಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ಬ್ರಹ್ಮನುತ್ಪತ್ಯಕ್ಕೆ ಹೊರಗಾಗಿ ಶ್ರೀಗುರುವಿನಿಂದ ಸರ್ವಾಂಗವೆಲ್ಲ ಶುದ್ಧಪ್ರಸಾದವಾಗುವುದಯ್ಯ. ಸಮಸ್ತವಿಷಯಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ವಿಷ್ಣುವಿನ ಸ್ಥಿತಿಗೆ ಹೊರಗಾಗಿ ಚಿದ್ಘನಮಹಾಲಿಂಗದಿಂದ ಸರ್ವಾಂಗವೆಲ್ಲ ಸಿದ್ಧಪ್ರಸಾದವಾಗುವುದಯ್ಯ. ಸಮಸ್ತಕರಣಂಗಳ ದುರ್ವರ್ತನಾಗುಣಂಗಳ ಜಯಿಸಿದಾತಂಗೆ ರುದ್ರನ ಲಯಕ್ಕೆ ಹೊರಗಾಗಿ ನಿರಾಲಂಬ ನಿಷ್ಕಳಂಕ ಜಂಗಮದಿಂದ ಸರ್ವಾಂಗೆಲ್ಲ ಪ್ರಸಿದ್ಧ ಪ್ರಸಾದವಾಗುವುದಯ್ಯ. ಇಂತು ಇಂದ್ರಿಯ ವಿಷಯ ಕರಣಗುಣಧರ್ಮಗಳಳಿದು, ಲಿಂಗೇಂದ್ರಿಯ ವಿಷಯ ಕರಣಂಗಳಾಗಿ, ಬ್ರಹ್ಮನುತ್ಪತ್ಯ, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೆ ಹೊರಗಾದಲ್ಲದೆ ಮಹಾಪ್ರಸಾದಿಸ್ಥಲದೊಳಗಣ ಷಟ್ಸ್ಥಲ ದೊರೆಯದು ನೋಡ ಸಂಗನಬಸವೇಶ್ವರ