Index   ವಚನ - 95    Search  
 
ಅಯ್ಯ, ಇಂತು ಶಿಖಿ ಕರ್ಪೂರಸಂಯೋಗದಂತೆ ನಿಜಶಿವಯೋಗಾಚಾರನುಸಂಧಾನವ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದೊಡನೆ ಚನ್ನಬಸವ ಪ್ರಮಥಗಣಸಾಕ್ಷಿಯಿಂದ ಮಹಾಪ್ರಭುಸ್ವಾಮಿಗಳ ಕರುಣಕಟಾಕ್ಷೆಯಿಂದ ಬೆಸಗೊಂಡು ಸರ್ವಾಂಗಲಿಂಗಸಂಧಾನದಿಂದ ಬೆರದು ಬಯಲಾದರು ಸಿದ್ಧರಾಮದೇಶಿಕೇಂದ್ರನು ನೋಡ ಸಂಗನಬಸವೇಶ್ವರ.