Index   ವಚನ - 13    Search  
 
ಸಪ್ತದ್ವೀಪಂಗಳ ರಚಿಸಿದ ಸಾವಿರೆಸಳಮುತ್ತಿನಮಂಟಪದೊಳಗೆ ಒಬ್ಬ ಸತಿಯಳು ನಿಂದು ಚಿಲ್ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ! ಅದು ಹೇಗೆಂದಡೆ: ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವನಂಗೀಕರಿಸಿಕೊಂಡು, ಪರವಶದಲ್ಲಿ ನಿಂದು, ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ಬಿಂದ್ವಾಕೃತಿಯೆಂಬ ಪಂಚಕೃತಿಗಳನಂಗೀಕರಿಸಿಕೊಂಡು, ನಿರಂಜನದೇಶಕೆ ಹೋಗಿ, ಮನಜ್ಞಾನ ಸುಜ್ಞಾನ ಪರಮಜ್ಞಾನ ಮಹಾಜ್ಞಾನ ಸ್ವಯಜ್ಞಾನವೆಂಬ ಪಂಚಜ್ಞಾನವನ್ನಂಗೀಕರಿಸಿಕೊಂಡು, ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ ಓಂ ನಮಃ ಓಂ ನಮಃ ಎನುತಿರ್ದೆನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.