ನಾಮರೂಪಕ್ರಿಯೆಯಿಲ್ಲದ ಮೂರ್ತಿಯೊಬ್ಬ.
ಚಿದಂಗನೆಯು ಉನ್ಮನಿಯ ಬಾಗಿಲಮುಂದೆ ನಿಂದು,
ಓಂ ಎಂಬ ಶ್ರುತಿವಿಡಿದು ಪವನಧ್ಯಾನ
ಲಿಂಗಧ್ಯಾನವ ಮಾಡುತಿರ್ಪಳು ನೋಡಾ!
ಇದು ಕಾರಣ ಇಪ್ಪತ್ತೈದು ಕಂಬದ ಶಿವಾಲಯದೊಳಗೆ
ಸುಳಿದಾಡುವ ಜಂಗಮವ ಕಂಡೆನಯ್ಯ.
ಆ ಜಂಗಮವು ಸಪ್ತೇಳುಸಾಗರಂಗಳ ದಾಂಟಿ,
ಅಷ್ಟಕುಲಪರ್ವತಂಗಳ ಮೆಟ್ಟಿ, ಒಂಬತ್ತು ಬಾಗಿಲ ಮುಂದೆ ನಿಂದು,
ತಲೆಯೋಡಿನಲಿ ತಿರಿದುಂಬ ಜಂಗಮದ ಪರಿಯೆಂತು ನೋಡಾ!
ಇದು ಕಾರಣ ಆ ಚಿದಂಗನೆಯ ಕೈವಿಡಿದು, ಪರಬ್ರಹ್ಮವಂ ಪೊಕ್ಕು
ನಿಷ್ಪತಿಲಿಂಗವೆ ನಿಮ್ಮ ಶರಣಸಂತತಿಗಳಲ್ಲದೆ
ಉಳಿದಾದ ಮತ್ತಜ್ಞಾನಿಗಳು
ಇವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.