ಪ್ರಥಮಕಾಲದಲ್ಲಿ ಅನಾದಿ ಜಂಗಮವು
ಸಾವಿರೆಸಳಮಂಟಪದಲ್ಲಿ ನಿಂದು,
ವಿಶ್ವತೋಮುಖವಾಗಿ ತೋರುತಿಪ್ಪನು ನೋಡಾ!
ಆ ಜಂಗಮದ ಚಿದ್ವಿಲಾಸದಿಂದ,
ಭಕ್ತಾಂಗನೆ ಉದಯವಾದಳು ನೋಡಾ!
ಆ ಭಕ್ತಾಂಗನೆಯು ಒಂದಗಲನಿಡಲೊಡನೆ
ಆ ಜಂಗಮ ಉಂಡು ಒಕ್ಕುದ ನಾನುಂಡು
ಮಹಾಧನ್ಯನಾದೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Prathamakāladalli anādi jaṅgamavu
sāviresaḷamaṇṭapadalli nindu,
viśvatōmukhavāgi tōrutippanu nōḍā!
Ā jaṅgamada cidvilāsadinda,
bhaktāṅgane udayavādaḷu nōḍā!
Ā bhaktāṅganeyu ondagalaniḍaloḍane
ā jaṅgama uṇḍu okkuda nānuṇḍu
mahādhan'yanāde nōḍā
jhēṅkāra nijaliṅgaprabhuve.