Index   ವಚನ - 200    Search  
 
ಜೀವಾತ್ಮ ಅಂತರಾತ್ಮ ಪರಮಾತ್ಮಯೆಂಬ ಭೇದವ ತಿಳಿದು ನಿಶ್ಚಿಂತ ನಿರಾಕುಳದ ಮೇಲೆ ನಿಂದು ನೋಡಲು ನಿರ್ವಯಲಿಂಗವು ಘೋಷಿಸುತಿರ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.