•  
  •  
  •  
  •  
Index   ವಚನ - 98    Search  
 
ಕಂಗಳೇಕೆ `ನೋಡಬೇಡಾ' ಎಂದರೆ ಮಾಣವು? ಶ್ರೋತ್ರಂಗಳೇಕೆ `ಆಲಿಸಬೇಡಾ' ಎಂದರೆ ಮಾಣವು? ಜಿಹ್ವೆ ಏಕೆ `ರುಚಿಸಬೇಡಾ' ಎಂದರೆ ಮಾಣದು? ನಾಸಿಕವೇಕೆ `ವಾಸಿಸಬೇಡಾ' ಎಂದರೆ ಮಾಣದು? ತ್ವಕ್ಕು ಏಕೆ `ಸೋಂಕಬೇಡಾ' ಎಂದರೆ ಮಾಣದು? ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು! ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
Transliteration Kaṅgaḷēke `nōḍabēḍā' endare māṇavu? Śrōtraṅgaḷēke `ālisabēḍā' endare māṇavu? Jihve ēke `rucisabēḍā' endare māṇadu? Nāsikavēke `vāsisabēḍā' endare māṇadu? Tvakku ēke `sōṅkabēḍā' endare māṇadu? Ī bhēdavanaridu nuḍiyalu samadhātuvāyittu! Guhēśvaraliṅgakke olida kāraṇa, abhimāna lajje bēsattu hōyittu.
Hindi Translation आंखों से मत देख कहें तो छोडता नहीं। कानों से मत सुनों कहें तो छोडता नहीं। जिह्वा से स्वाद मत ले कहें तो छोडता नहीं। नासिक से मत सूंघ कहें तो छोडता नहीं। त्वचा से मत स्पर्श कहें तो छोडता नहीं। यह भेद जानकर कहें तो एक हो जाता है। गुहेश्वर लिंग में आसक्त होने से अभिमान, लज्जा दोनों दूर हो गये। Translated by: Eswara Sharma M and Govindarao B N
Tamil Translation காணவேண்டாமெனின் கண்கள் ஏன் விடுவதில்லை? கேட்க வேண்டாமெனின் செவிகள் ஏன் விடுவதில்லை? சுவைக்க வேண்டாமெனின் நாக்கு ஏன் விடுவதில்லை? நுகர வேண்டாமெனின் மூக்கு ஏன் விடுவதில்லை? தீண்ட வேண்டாமெனின் தோல் ஏன் விடுவதில்லை? விதிமுறைகளை உணர்ந்து கூறியதும் ஒன்றிவிட்டன. குஹேசுவரலிங்கத்தை நயந்ததால் உலகியல் பற்று குழப்பம் என்னுமிவை அடங்கி விட்டனவன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಲಿಸಬೇಡ = ಕಿವಿಗಳು ಅದೇಕೆ ಆಲಿಸುವುದನ್ನು ಬಿಡುವುದಿಲ್ಲ?; ನೋಡಬೇಡ = ಕಂಗಳು ಅದೇಕೆ ನೋಡುವುದನ್ನು ಬಿಡುವುದಿಲ್ಲ? ; ರುಚಿಸಬೇಡ = ಜಿಹ್ವೆಯು ಅದೇಕೆ ರುಚಿಸುವುದನ್ನು ಬಿಡುವುದಿಲ್ಲ?; ವಾಸಿಸಬೇಡ = ನಾಸಿಕವು ಅದೇಕೆ ಘ್ರಾಣಿಸುವುದನ್ನು ಬಿಡುವುದಿಲ್ಲ?; ಸ್ಪರ್ಶಿಸಬೇಡ = ತ್ವಕ್ಕು ಅದೇಕೆ ಸ್ಪರ್ಶಿಸುವುದನ್ನು ಬಿಡುವುದಿಲ್ಲ?; Written by: Sri Siddeswara Swamiji, Vijayapura