ಬಿಸುಜಂತೆ ಜವಳಿಗಂಭ!
ಲೇಸಾಯಿತ್ತು ಮನೆ, ಲೇಸಾಯಿತ್ತು ಮೇಲುವೊದಿಕೆ.
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ ಸುಟ್ಟು,
ಮನೆಯನಿಂಬು ಮಾಡಿದೆ ಲಿಂಗಜಂಗಮಕ್ಕೆ.
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರಾ.
Transliteration Bisujante javaḷigambha!
Lēsāyittu mane, lēsāyittu mēluvodike.
Maguḷe ā aṅgakke kiccanikki suṭṭu,
maneyanimbu māḍide liṅgajaṅgamakke.
Huṭṭugeṭṭu baṭṭabayalalli nānidēne guhēśvarā.
Hindi Translation बीचवाली धरन, युगल स्तंभ!
ठीक हुआ घर, ठीक हुआ छावनी।
फिर उस शरीर को आग लगाकर
घर योग्य बनादिया लिंग जंगम को
पैदाइश टूट गयी, बंधमुक्त हो गया गुहेश्वरा।
Translated by: Eswara Sharma M and Govindarao B N
Tamil Translation மேல்விட்டம் இரு கம்பங்கள்!
மங்கலகரமான வீடு, மங்கலகரமான மேற்கூரை,
மீண்டும் அந்த வீட்டிற்கு தீவைத்து
வீட்டை இலிங்கஜங்கமருக்கு அர்ப்பித்தேன்
பிறவியகன்று, வெட்டவெளியில் நானுளேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ಮನವೆಂಬ ಮನೆ; ಕಿಚ್ಚು = ಗುರುವಿನಿಂದ ಪಡೆದ ಜ್ಞಾನ; ಜವಳಿಗಂಭ = ಆ ತೊಲೆಯ ಹೊತ್ತು ನಿಂತ ಎರಡು ಕವಲುಕಂಭಗಳು; ಬಟ್ಟಬಯಲಲ್ಲಿ ಇರುವುದ = ಇದು ನನ್ನ ಮನೆಯಲ್ಲ ಎಂದು ಭಾವಿಸಿ ಬಾಳುವುದು; ಅನಿಕೇತನನಾಗಿ ನಿಲ್ಲುವುದು; ಬಿಸುಜಂತೆ = ಮಧ್ಯದ ತೊಲೆ; ಮೇಲುವೊದಿಕೆ = ಛಾವಣಿ; ಹುಟ್ಟುಗೆಟ್ಟು = ಮೊದಲಿದ್ದ ಭಾವ; ಸಂಸ್ಕಾರವನ್ನು ಪಡೆಯುವ ಮುಂಚೆ ಇದ್ದ ದೇಹಾತ್ಮ ಭಾವ; ದೇಹದ ವ್ಯಾಮೋಹ ನಷ್ಟವಾಗಿ;
Written by: Sri Siddeswara Swamiji, Vijayapura