ವಚನ - 154     
 
ಕಾಮವುಳ್ಳವರಿಗೆ ಕಾಯಸಂಗ ಮಚ್ಚು ನೋಡಾ. ಕಾಮವಿಲ್ಲದವರಿಗೆ ಲಿಂಗಸಂಗ ಮಚ್ಚು ನೋಡಾ. ಕಾಮವಿಕಾರಿ ಕಾಯದತ್ತ ಮುಂದಾದಡೆ, ನಾ ನಿಮ್ಮತ್ತ ಮುಂದಾದೆ. ಚೆನ್ನಮಲ್ಲಿಕಾರ್ಜುನಯ್ಯಾ, ಕಾಮವಿಕಾರಿಯ ಸಂಗವ ಹೊದ್ದಿದಡೆ ನಿಮ್ಮಾಣೆ.