ವಚನ - 179     
 
ಕೈಸಿರಿಯ ದಂಡವ ಕೊಳಬಹುದಲ್ಲದೆ, ಮೈಸಿರಿಯ ದಂಡವ ಕೊಳಲುಂಟೆ? ಉಟ್ಟ ಉಡಿಗೆಯ ಸೆಳೆದುಕೊಳಬಹುದಲ್ಲದೆ, ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ? ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡುಗೆಯ ಹಂಗೇಕೋ ಮರುಳೆ.