ವಚನ - 182     
 
ಕ್ರೀಯುಳ್ಳಡಂತೊಂದಾಸೆ, ಸದ್ಭಕ್ತರ ನುಡಿಗಡಣವುಳ್ಳಡಂತೊಂದಾಸೆ, ಶ್ರೀಗಿರಿಯನೇರಿ ನಿಮ್ಮ ಬೆರಸಿದಡೆ ಎನ್ನಾಸೆಗೆ ಕಡೆಯೆ ಅಯ್ಯಾ? ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ.