ವಚನ - 183     
 
ಕ್ರಿಯೆಗಳು ಮುಟ್ಟಲರಿಯವು, ನಿಮ್ಮನೆಂತು ಪೂಜಿಸುವೆ? ನಾದ ಬಿಂದುಗಳು ಮುಟ್ಟಲರಿಯವು, ನಿಮ್ಮನೆಂತು ಹಾಡುವೆ? ಕಾಯ ಮುಟ್ಟುವಡೆ ಕಾಣಬಾರದ ಘನವು, ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ? ಚೆನ್ನಮಲ್ಲಿಕಾರ್ಜುನಯ್ಯಾ, ನಾನೇನೆಂದರಿಯದೆ ನಿಮ್ಮ ನೋಡಿ ನೋಡಿ ಸೈವೆರಗಾಗುತಿರ್ದೆನು.