ವಚನ - 268     
 
ನೋಡೆನೆಂಬವರ ನೋಡಿಸುವೆ, ನುಡಿಯೆನೆಂಬವರ ನುಡಿಯಿಸುವೆ, ಒಲ್ಲೆನೆಂಬವರನೊಲಿಸುವೆ, ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ.