ವಚನ - 343     
 
ಮೋಹವುಳ್ಳಲ್ಲಿ ಮಚ್ಚುವಂತೆ ಮಾಡಯ್ಯಾ. ಮೋಹವುಳ್ಳಲ್ಲಿ ಕರುಳುವ ಕೊಯ್ಯಯ್ಯಾ. ಮೋಹವುಳ್ಳಲ್ಲಿ ಬೆರಳುವ ಕಡಿಯಯ್ಯಾ. ಚೆನ್ನಮಲ್ಲಿಕಾರ್ಜುನದೇವಯ್ಯಾ, ನೊಂದೆನೆಂದಡೆ ಮನಕತಮಾಡಯ್ಯಾ.