ವಚನ - 355     
 
ಲಿಂಗಾನುಭಾವ ಸಿದ್ಧಿಯಾದ ಬಳಿಕ ಮತ್ತೇಕಯ್ಯ ಕೂಟವೆಮಗೆ ಹೆರರೊಡನೆ? ಹೇಳಿರಯ್ಯಾ, ಎನ್ನದೇವ ಚೆನ್ನಮಲ್ಲಿಕಾರ್ಜುನನು ಕರುಣಿಸಿದ ಬಳಿಕ?