ವಚನ - 359     
 
ವಟವೃಕ್ಷದೊಳಡಗಿದ ಸಮರಸ ಬೀಜ, ಭಿನ್ನಭಾವಕ್ಕೆ ಬಪ್ಪುದೆ? ಕಂಗಳ ನೋಟ, ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ. ಈ ಮರೀಚಿಕಾ ಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ? ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಾ.