ವಚನ - 361     
 
ವನವೆಲ್ಲಾ ನೀನೆ, ವನದೊಳಗಣ ದೇವ ತರುವೆಲ್ಲಾ ನೀನೆ, ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ. ಚೆನ್ನಮಲ್ಲಿಕಾರ್ಜುನಾ,ಸರ್ವಭರಿತನಾಗಿ ಎನಗೇಕೆ ಮುಖದೋರೆ?