Index   ವಚನ - 10    Search  
 
ಆದಿ ಮಧ್ಯಾವಸಾನವಿಲ್ಲದಂದು, ಆದಿ ಅನಾದಿ, ಬಿಂದು, ಕಳೆಗಳಿಲ್ಲದಂದು, ಸಾವಯ, ನಿರವಯವಿಲ್ಲದಂದು, ತತ್ವ ಬ್ರಹ್ಮಾಂಡಾದಿ ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು; ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿದ್ದೆಯಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.