Index   ವಚನ - 12    Search  
 
ವಾಚ್ಯಾವಾಚ್ಯಂಗಳಿಲ್ಲದಂದು, ಪಕ್ಷಾಪಕ್ಷಗಳಿಲ್ಲದಂದು, ಸಾಕ್ಷಿ, ಸಭೆಗಳಿಲ್ಲದಂದು, ಪೃಥ್ವಿ ಆಕಾಶಾದಿಗಳಿಲ್ಲದಂದು, ಉತ್ಪತ್ತಿ, ಸ್ಥಿತಿ, ಲಯಂಗಳಿಲ್ಲದಂದು, ಸತ್ವ, ರಜ, ತಮಗಳೆಂಬ ಗುಣತ್ರಯಂಗಳಿಲ್ಲದಂದು, ಅಹಂಕಾರ ಮಮಕಾರ ಪ್ರಕೃತಿ ಮಹತ್ತು, ಮಾಯಾ ಪ್ರಪಂಚು ಮೊಳೆದೋರದಂದು, ಮಾಯಿಕ ನಿರ್ಮಾಯಿಕಂಗಳು ಹುಟ್ಟದಂದು, ಜ್ಞಾನಾಜ್ಞಾನಗಳು ಉದಯವಾಗದಂದು, ರೂಪು ನಿರೂಪು ಹುಟ್ಟದಂದು, ಕಾಮ ನಿಃಕಾಮಂಗಳಿಲ್ಲದಂದು, ಮಾಯಾಮಾಯಂಗಳೇನುಯೇನೂ ಇಲ್ಲದಂದು, ನಿನ್ನ ನಿರ್ಮಾಯನೆಂದು ಹೆಸರಿಟ್ಟು ಹೇಳುವರಾರೂ ಇಲ್ಲದಂದು, ನಿಜವು ನಿನ್ನಯ ಘನತೆಯ ನೀನರಿಯದೆ, ಇದಿರನು ಅರಿಯದೆ, ಏನನೂ ಅರಿಯದೆ, ನೀನೆ ನೀನಾಗಿರ್ದೆಯಲ್ಲಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.