Index   ವಚನ - 14    Search  
 
ಸ್ಥೂಲ ಸೂಕ್ಷ್ಮ ಪರತತ್ವವೆಂಬ ನಾಮ ನಿನಗಿಲ್ಲದಂದು, ನಿನ್ನ ಸ್ಥೂಲನೆಂದು ಕುರುಪಿಡುವ ಅಜ, ಹರಿ, ಸುರಪತಿ ಮೊದಲಾದ ದೇವತೆಗಳಿಲ್ಲದಂದು, ನಿನ್ನ ಸೂಕ್ಷ್ಮನೆಂದು ಕುರುಪಿಡುವ ಮನು ಮುನೀಶ್ವರರಿಲ್ಲದಂದು, ನಿನ್ನ ಸ್ಥೂಲ ಸೂಕ್ಷ್ಮ ಪರಾತ್ಪರನೆಂದು, ನಿನ್ನ ಆದಿ ಮಧ್ಯಾವಸಾನ ಅಖಂಡ ಪರಿಪೂರ್ಣತ್ವವನರಿವ, ಅವಿರಳ ಜ್ಞಾನಸಂಬಂಧಿಗಳಪ್ಪ ಗಣಾಧೀಶ್ವರರಿಲ್ಲದಂದು, ಇವರಾರೂ ಇಲ್ಲದಂದು ಅನಾದಿ ಪರಶಿವನೆಂದೆನಲಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.