ಬಿಂದುಮಾಯಿಕವಿಲ್ಲದಂದು
ಮೂವತ್ತಾರು ತತ್ವಂಗಳುತ್ಪತ್ತಿಯಾಗದಂದು,
ತತ್ ಪದ ತ್ವಂ ಪದ ಅಸಿ ಪದವೆಂಬ ಪದತ್ರಯಂಗಳಿಲ್ಲದಂದು,
ತತ್ ಪದವೆ ಲಿಂಗ, ತ್ವಂ ಪದವೆ ಅಂಗ,
ಅಸಿ ಪದವೆ ಲಿಂಗಾಂಗಸಂಯೋಗ.
ಈ ಅಂಗ ಲಿಂಗ ಸಂಬಂಧವೆಂದು,
ಈ ತತ್ವಮಸ್ಯಾದಿ ವಾಕ್ಯಾರ್ಥವಿಲ್ಲದಂದು,
ಅಲ್ಲಿಂದತ್ತತ್ತ ನೀನು ಪರಾತ್ಪರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music Courtesy:
Video
TransliterationBindumāyikavilladandu
mūvattāru tatvaṅgaḷutpattiyāgadandu,
tat pada tvaṁ pada asi padavemba padatrayaṅgaḷilladandu,
tat padave liṅga, tvaṁ padave aṅga,
asi padave liṅgāṅgasanyōga.
Ī aṅga liṅga sambandhavendu,
ī tatvamasyādi vākyārthavilladandu,
allindattatta nīnu parātparanu nōḍā,
mahāliṅgaguru śivasid'dhēśvara prabhuvē.