Index   ವಚನ - 23    Search  
 
ಆದಿಯ ಸಂಗದಲಾದವನ ದೇವರೆಂದೆನ್ನೆ, ಸಂಗ ಸುಖದಲಿಪ್ಪವನ ದೇವರೆಂದೆನ್ನೆ, ಶಕ್ತಿ ಸಂಪುಟವಾದವನ ದೇವೆರೆಂದೆನ್ನೆ, ಇಬ್ಬರ ಸಂಗದಲಾದವನ ದೇವರೆಂದೆನ್ನೆ, ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯವುಳ್ಳವನ ದೇವರೆಂದೆನ್ನೆ, ಸಗುಣ ನಿರ್ಗುಣವುಳ್ಳವನ ದೇವರೆಂದೆನ್ನೆ, ಸಗುಣ ನಿರ್ಗುಣಗಳಿಗೆ ಮಿಗೆಮಿಗೆಯಾಗಿ ತೋರುವ ಪರಮಾವ್ಯಯ ನೀನಾದ ಕಾರಣ, ನಿರವಯಲಿಂಗವೆಂದೆ; ನಿಃಕಲಪರಬ್ರಹ್ಮವೆಂದೆ, ಏಕಮೇವನದ್ವಿತೀಯ ಪರಾತ್ಪರವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.