Index   ವಚನ - 22    Search  
 
ತಂದೆಯಿಲ್ಲದ, ತಾಯಿಯಿಲ್ಲದ, ಹೆಸರಿಲ್ಲದ, ಕುಲವಿಲ್ಲದ, ಹುಟ್ಟಿಲ್ಲದ, ಹೊಂದಿಲ್ಲದ, ಅಯೋನಿಸಂಭವ ನೀನಾದ ಕಾರಣ ನಿನ್ನ ನಾನು ನಿಃಕಲಲಿಂಗವೆಂದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.