ಪರಶಕ್ತಿ ಶಾಂತಿಯೆನಲು ಪರಶಿವ ಶಕ್ತಿಯ ನಾಮವೀಗ.
ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು
ನಿಃಕಲ ತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ,
ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ,
ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ
ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ:
ಸದಾಶಿವತತ್ವ, ಈಶ್ವರತತ್ವ , ಮಹೇಶ್ವರತತ್ವ ಈ ಮೂರು
ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು,
ಭಕ್ತರ ಪೂಜೆಯ ಕೈಕೊಂಡು,
ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು,
ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ,
ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು.
ಅದಕ್ಕೆ ಕರ ಚರಣಾದ್ವವಯವಂಗಳಿಲ್ಲ.
ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಸ್ವರೂಪನುಳ್ಳದು.
ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದುದು.
ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭೀಕರಿಸಿಕೊಂಡು,
ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ
ಪರಂಜ್ಯೋತಿರ್ಲಿಂಗವು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Paraśakti śāntiyenalu paraśiva śaktiya nāmavīga.
Nāda bindu kaḷe kaḷānvita ī nālku
niḥkala tatvayōgigaḷa dhyāna, bhaktara pūje,
vēdāgamaṅgaḷa śrutakke atītavāgi, vāṅmanātītavāgi,
ā vāṅmanakkagōcaravāda niḥkalatatvavē
sakala niḥkalavāgi tōrittadentendoḍe:
Sadāśivatatva, īśvaratatva, mahēśvaratatva ī mūru
sakala niḥkalatatvayōgigaḷa dhyānava kaikoṇḍu,
bhaktara pūjeya kaikoṇḍu,
japa tapa, nēma nitya, vēdāgamaṅgaḷa stutiyanu kaikoṇḍu,
jagadutpattikāraṇa paraśivana saṅkalpadinda,
Nāda bindu kaḷe samētavāgi liṅgavenisittu.
Adakke kara caraṇādvavayavaṅgaḷilla.
Akhaṇḍa paripūrṇa gōḷakākāra tējōmūrti svarūpanuḷḷadu.
Vyakta avyakta ānanda sukhamayavāgiddantādudu.
Anantakōṭi brahmāṇḍagaḷa tannalli garbhīkarisikoṇḍu,
anantakōṭi sōma sūryaprakāśavanuḷḷa
paran̄jyōtirliṅgavu
mahāliṅgaguru śivasid'dhēśvara prabhuvē.