Index   ವಚನ - 47    Search  
 
ಚಿನ್ಮಯ ವಸ್ತುವಿನಿಂದ ಚಿದ್ಬಿಂದು ಉದಯಿಸಿತ್ತು. ಆ ಚಿತ್ತಿನ ಪ್ರಭೆಯಲ್ಲಿ ಶರಣನುದಯಿಸಿದನು. ಇದು ಕಾರಣ, ಚಿನ್ಮಯ, ಚಿದ್ರೂಪ, ಚಿತ್‍ಪ್ರಕಾಶ, ಚಿದಾತ್ಮನೆ ಶರಣನೆಂಬ ವಾಕ್ಯ ಸತ್ಯಕಂಡಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.