ಇವು ಮೂರೂ ನಿತ್ಯವಾದಡೆ, ಮಾಯೆಯೂ ಆತ್ಮನು
ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗುತ್ತಿಪ್ಪವು ನೋಡಾ.
ಶಿವನೆ ಉತ್ಪತ್ತಿ ಸ್ಥಿತಿ ಪ್ರಳಯರಹಿತನಾಗಿ ನಿತ್ಯನಾಗಿಪ್ಪನು ನೋಡಾ.
ಇದು ಕಾರಣ, ಅನಿತ್ಯವಾದ ಪಶುಪಾಶಂಗಳ ನಿತ್ಯವೆಂಬುದು
ಅದು ಅಜ್ಞಾನ ನೋಡಾ.
ಶಿವಜ್ಞಾನೋದಯದಿಂದ ತಿಳಿದುನೋಡಿದರೆ,
ಶಿವತತ್ವವೊಂದೇ ನಿತ್ಯವು; ಉಳಿದವೆಲ್ಲವು ಅನಿತ್ಯ ಕಾಣಾ.
ಹೀಂಗೆಂದು ಕಂಡ ಕಾಣಿಕೆ ನೀನೇ ನೋಡಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.