Index   ವಚನ - 104    Search  
 
ಕೋಡಗನ ಅಣಲ ಸಂಚಲದಲ್ಲಿ ಎರಡು ದಾಡೆ ಹುಟ್ಟಿದವು ನೋಡಾ. ಆ ದಾಡೆಯ ಸಂಚಲದಲ್ಲಿ ಮೂರುಲೋಕವೆಲ್ಲ ಆಳುತ್ತ ಮುಳುಗುತ್ತಿದೆ ನೋಡಾ. ತ್ರೈಜಗದ ಮಸ್ತಕವನೊಡದು ನೀವು ಮೂಡಲು ಈರೇಳು ಲೋಕವೆಲ್ಲ ಬೆಳಗಾಯಿತ್ತು ನೋಡಾ. ಈರೇಳು ಲೋಕವನೊಳಕೊಂಡ ಬೆಳಗು ತಾನೆಂದರಿಯಲು ಕೋಡಗನಣಲಸಂಚದ ದಾಡೆ ಮುರಿಯಿತ್ತು; ಮೂರುಲೋಕದ ವೇದನೆ ಮಾದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.