ತನು ನಿನಗನ್ಯವೆಂದರಿಯದೆ, ತನು ನಿನ್ನದೆಂಬೆ;
ಮನ ನಿನಗನ್ಯವೆಂದರಿಯದೆ, ಮನ ನಿನ್ನದೆಂಬೆ;
ಧನ ನಿನಗನ್ಯವೆಂದರಿಯದೆ, ಧನ ನಿನ್ನದೆಂಬೆ;
ಸ್ಥೂಲ ಸೂಕ್ಷ್ಮ ಕಾರಣವೆಂದೆಂಬ ತನುತ್ರಯ ನೀನಲ್ಲ;
ಮನ ಮನನ ಮಾನನೀಯವೆಂದೆಂಬ ಮನತ್ರಯ ನೀನಲ್ಲ;
ಧನ ಮಮಕಾರ ಸಂಗ್ರಹವೆಂಬ ಕಾರ್ಮಿಕತ್ರಯ ನೀನಲ್ಲ;
ಇವು ಒಂದೂ ನೀನಲ್ಲ; ನೀನಾರೆಂದಡೆ:
ನೀನು ಸಚ್ಚಿದಾನಂದ ಸ್ವರೂಪವಪ್ಪ ಶಿವತತ್ವವೇ
ನೀನೆಂದು ತಿಳಿದು ನೋಡಾ, ಉಳಿದವೆಲ್ಲಾ ಹುಸಿಯೆನ್ನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Tanu ninagan'yavendariyade, tanu ninnadembe;
mana ninagan'yavendariyade, mana ninnadembe;
dhana ninagan'yavendariyade, dhana ninnadembe;
sthūla sūkṣma kāraṇavendemba tanutraya nīnalla;
mana manana mānanīyavendemba manatraya nīnalla;
dhana mamakāra saṅgrahavemba kārmikatraya nīnalla;
ivu ondū nīnalla; nīnārendaḍe:
Nīnu saccidānanda svarūpavappa śivatatvavē
nīnendu tiḷidu nōḍā, uḷidavellā husiyennu,
mahāliṅgaguru śivasid'dhēśvara prabhuvē.