Index   ವಚನ - 139    Search  
 
ಕಾಯಗೊಂಡು ಹುಟ್ಟಿಸಿ, ಕರಣಾದಿ ಗುಣಂಗಳಿಗೆ ಗುರಿಮಾಡಿ, ಕಾಡಿಸಾಡುವಿರಯ್ಯ. ಇದು ಕಾರಣ, ಎನ್ನ ಕಾಯದ ಕರಣದ ಗುಣಂಗಳ ಕಳದು ಎನ್ನ ಒಳಹೊರಗೆ ಹಿಡಿದಿಪ್ಪ ಮಾಯಾ ಪ್ರಪಂಚವ ಮಾಣಿಸಿ, ನೀವಲ್ಲದೆ ಮತ್ತೇನುವನು ಅರಿಯದಂತೆ ಸಂಸಾರ ಸುಖವ ನೆನೆಯದಂತೆ ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.