ಊರಿಗೆ ಹೋಗುವ ದಾರಿಯೊಳಗೊಬ್ಬ
ಉಲುಗಿತ್ತಿ ಮನೆಯ ಮಾಡಿಕೊಂಡು,
ದಾರಿಗೊಂಡು ಹೋಗುವ ಅಯ್ಯಗಳ ಬಾರಿಭೋ ಬಾರಿಭೋ
ಎನುತ್ತೈದಾಳೆ ನೋಡಾ.
ನಾರಿಯ ವಿಲಾಸವ ನೋಡಿ
ದಾರಿಯ ತಪ್ಪಿದರು ನೋಡಾ ಅಯ್ಯಗಳು.
ನಾರಿಯ ಕೊಂದಲ್ಲದೆ ದಾರಿಯ ಕಾಣಬಾರದು.
ನಾರಿಯ ಕೊಂದು ದಾರಿಹಿಡಿದು ನಡದು
ಊರ ಹೊಕ್ಕಲ್ಲದೆ ಉಪಟಳವಡಗದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ūrige hōguva dāriyoḷagobba
ulugitti maneya māḍikoṇḍu,
dārigoṇḍu hōguva ayyagaḷa bāribhō bāribhō
enuttaidāḷe nōḍā.
Nāriya vilāsava nōḍi
dāriya tappidaru nōḍā ayyagaḷu.
Nāriya kondallade dāriya kāṇabāradu.
Nāriya kondu dārihiḍidu naḍadu
ūra hokkallade upaṭaḷavaḍagadu kāṇā
mahāliṅgaguru śivasid'dhēśvara prabhuvē.