Index   ವಚನ - 211    Search  
 
ಇದು ಕಾರಣ, ಎನ್ನ ಮಾನಸ ನಿಮ್ಮುವನೆ ನೆನೆವುತಿಪ್ಪುದು. ಎನ್ನ ವಾಚಕ ನಿಮ್ಮುವನೆ ಕೀರ್ತಿಸುತಿಪ್ಪುದು. ಎನ್ನ ಕಾಯಕ ಷಟ್‍ಕರ್ಮಂಗಳನೆಲ್ಲ ಮರೆದು ಶಿವಲಿಂಗಕೃತ್ಯವನೆ ಮಾಡುತಿಪ್ಪುದು ನೋಡಾ. ಈ ಭಾಷೆ ಮನ ಮನತಾರ್ಕಣೆಯಾಗಿ ಹುಸಿಯಲ್ಲ. ತನಗಿಲ್ಲದುದನುಂಟುಮಾಡಿಕೊಂಡು ಹುಸಿವನೇ ಶಿವಶರಣ? ಅದಲ್ಲ ಬಿಡು. ಎನ್ನ ಜಾಗರು ಸ್ವಪ್ನ ಸುಷುಪ್ತಿಯೊಳು ಶಿವ ಶಿವಾ ಶಿವ ಶಿವಾಯೆಂದು ಭವಭಾರವ ನೀಗಿ ನಾನು ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.