ಗುರು ಲಿಂಗ ಜಂಗಮದ ಭಕ್ತರೆಂದು
ಗುಣಕಥನವ ನುಡಿದುಕೊಂಡು
ಎಮಗೆ ಅನ್ಯದೈವವಿಲ್ಲವೆಂಬ ಸೋರೆಯ ಬಣ್ಣದ
ಅಣ್ಣಗಳು ನೀವು ಕೇಳಿಭೋ.
ನೀವರಿಯದಿದ್ದರೆ ನಾ ಹೇಳಿಹೆ ಕೇಳಿಭೋ.
ಹೆಣ್ಣೊಂದು ಭೂತ; ಮಣ್ಣೊಂದು ಭೂತ; ಹೊನ್ನೊಂದು ಭೂತ.
ಹೆಣ್ಣು ನಿಮ್ಮದೆಂಬಿರಿ; ಮಣ್ಣು ನಿಮ್ಮದೆಂಬಿರಿ;
ಹೊನ್ನು ನಿಮ್ಮದೆಂಬಿರಿ.
ಅವೇ ಪ್ರಾಣವಾಗಿ ಸಾವುತ್ತ ಹುಟ್ಟುತ್ತಿಪ್ಪಿರಿ.
ಆ ಭೂತ ನಿಮ್ಮ ಹಿಡಿದು, ಹಿಸಿಕಿ ಕೊಂದು ಕೂಗಿ,
ತಿಂದು ತೇಗಿ, ಹೀರಿ ಹಿಪ್ಪೆಯ ಮಾಡಿ
ಗಾರುಮಾಡುತಿಪ್ಪವು ಕಾಣಿಭೋ.
ಅ[ವ] ನೀವು ಹಿಡಿದು ಕೀರ್ತಿಸುತಿರ್ದು
ಎಮಗೆ ಅನ್ಯದೈವವಿಲ್ಲೆಂಬ ಕುನ್ನಿಮನುಜರ ಮೆಚ್ಚುವನೆ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.