Index   ವಚನ - 373    Search  
 
ಆದಿಯಾಧಾರದಲ್ಲಿ ಆದಿಲಿಂಗವ ಕಂಡೆನಯ್ಯ. ಆದಿಲಿಂಗದ ಸಂಧಾನದ ಭೇದಾದಿಭೇದದಿಂದ ಮೂಲ ಪ್ರಣವವ ತಿಳಿದು ನಾದ ಬೆಳಗಿನ ಕಳೆಯ ನೋಡಿ ಕಂಡೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.