Index   ವಚನ - 386    Search  
 
ತಾಳ ಮರನ ಹಿಡಿದು ತನಿರಸವನುಂಬನ್ನಕ್ಕರ ಬಾರದ ಭವದಲ್ಲಿ ಬಪ್ಪುದು ತಪ್ಪದು ನೋಡಾ. ತಾಳಮರನ ಹಿಡಿಯದೆ ತನಿರಸವ ಮುಟ್ಟದೆ ಮೇಲಣ ಹಾಲಕುಡಿಯಬಲ್ಲರಾಗಿ ನಿಮ್ಮ ಶರಣರು ಭವವಿರಹಿತರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.