Index   ವಚನ - 401    Search  
 
ಸುಡುವಗ್ನಿ ಕಾಷ್ಠದಿರವ ಬಲ್ಲುದೆ ಅಯ್ಯಾ? ಕೊರೆದು ಹರಿವ ಉದಕ ಗಿರಿಯ ಗರ್ವವ ಬಲ್ಲುದೆ ಅಯ್ಯಾ? ಮುರಿದು ತಿಂಬ ತೋಳ ಕುರಿಯ ಮರಿಯ ಬೇನೆಯ ಬಲ್ಲುದೆ? ಅಯ್ಯಾ ತನ್ನವಸರಕ್ಕೆ ಆರನಾದರೂ ಸಾಧಿಸಿ ಭೇದಿಸಿ ಕೊಂಬೆ ತಿಂಬೆನೆಂಬವ ಅಸತ್ಯ ಸುಸತ್ಯದ ಕುರುಹ ಬಲ್ಲನೆ? ಸತ್ಯದ ಕುರುಹನರಿಯನಾಗಿ ಶಿವಭಕ್ತಿಯನೆಂತರಿವನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.