Index   ವಚನ - 403    Search  
 
ಕೋತಿಗೆ ಕೊಂಬು ಹುಟ್ಟಬಲ್ಲುದೆ? ನುಚ್ಚಕ್ಕಿ ಮೊಳೆಯಬಲ್ಲುದೆ? ಸತ್ತ ಮರ ಎಳಕ ಬಲ್ಲುದೆ? ಅರೆಯ ಮೇಲೆ ತಾವರೆ ಬೆಳೆಯಬಲ್ಲುದೆ ಅಯ್ಯ? ದುರ್ಬುದ್ಧಿ ಮಾನವರ ಭಾವದಲ್ಲಿ ಶಿವಜ್ಞಾನ ಕರಿಗೊಳ್ಳಬಲ್ಲುದೆ ಅಯ್ಯ? ಶಿವಜ್ಞಾನವಿಲ್ಲದವರಿಗೆ ಶಿವಕೃಪೆಯೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ