Index   ವಚನ - 415    Search  
 
ಮರಕ್ಕೂ ಕೊಂಬಿಗೂ ಭೇದವುಂಟೇ ಅಯ್ಯ? ಅಂಗಕ್ಕೂ ಅವಯವಗಳಿಗೂ ಭೇದವುಂಟೇ ಅಯ್ಯ? ಅಂಗದ ಮೇಲೆ ಲಿಂಗವನಿರಿಸಬಹುದು, ಅವಯವಂಗಳ ಮೇಲೆ ಲಿಂಗನಿರಿಸಬಾರದೇಕೆಂಬಿರಯ್ಯ. ಅಂಗವೇ ಶುದ್ಧ, ಅವಯವಂಗಳು ಅಶುದ್ಧವೇ ಮರುಳುಗಳಿರಾ? ಮುಚ್ಚಿಕೊಂಡಿರಿ ಭೋ. ಲಿಂಗ ಪ್ರಸಾದವ ಕೊಂಬ ಶರಣಂಗೆ ಕೈ, ಬಾಯಿ, ಅವಯವಂಗಳೊಳಗೆಲ್ಲವು ಲಿಂಗವೇ ತುಂಬಿಪ್ಪುದು ಕಾಣಿಭೋ. ಈ ಶರಣ ಲಿಂಗದ ಸಮರಸವನಿವರೆತ್ತ ಬಲ್ಲರಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.