Index   ವಚನ - 421    Search  
 
ಮಾಳಿಗೆಯ ಮನೆಯ ಕಾಳಿಕೆಯೊಳಗೆ ಹೂಳಿದ್ದ ವಸ್ತು ಇದೇನಯ್ಯ ಮಾಳಿಗೆ ಬಯಲಾಗಿ ಕಾಳಿಕೆ ಅಳಿದಲ್ಲದೆ; ಹೂಳಿದ್ದ ವಸ್ತುವ ಕಾಣಲಾರಳವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.