Index   ವಚನ - 448    Search  
 
ಮದಗಜದ ಹೃದಯದಲ್ಲಿ ಮರಿವಾಲಿಪ್ಪುದ ಕಂಡೆನಯ್ಯ. ಹುಲ್ಲೆ ಅರಿಯದೆ ಹುಲಿಯ ಬಾಯ ತುತ್ತಾಯಿತ್ತಲ್ಲಾ. ಬಲ್ಲವರ ಕಡೆಯಿಂದ ಭಾಸ್ಕರನುದಯಿಸಲು ಹುಲಿಬಿಟ್ಟು ಹುಲ್ಲೆ ಮರಿವಾಲನುಂಡು ಮರಣನವಳಿಯಿತ್ತಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.