Index   ವಚನ - 459    Search  
 
ಪರುಷ ಸೋಂಕಿಯೂ ಪಾಷಾಣ ಶುದ್ಧವಾಗದಿದ್ದರೆ ಆ ಪರುಷದ ಗೊಡವೆ ಏತಕಯ್ಯ? ಅಗ್ನಿ ಸೋಂಕಿಯೂ ಕಾಷ್ಠದ ಗುಣವಳಿಯದಿದ್ದರೆ ಆ ಅಗ್ನಿಯ ಗೊಡವೆ ಏತಕಯ್ಯ? ಗರುಡನಿದ್ದೂ ಸರ್ಪದ ಭಯ ಹಿಂಗದಿದ್ದರೆ ಆ ಗರುಡನ ಗೊಡವೆ ಏತಕಯ್ಯ? ವಜ್ರಾಂಗಿಯ ತೊಟ್ಟಿರ್ದೂ ಬಾಣದ ಭಯ ಹಿಂಗದಿದ್ದರೆ ಆ ವಜ್ರಾಂಗಿಯ ಗೊಡವೆ ಏತಕಯ್ಯ? ಆನೆಯನೇರಿಯೂ ಶ್ವಾನನ ಭಯಹಿಂಗದಿದ್ದರೆ ಆ ಆನೆಯ ಗೊಡವೆ ಏತಕಯ್ಯ? ಜ್ಯೋತಿಯಿದ್ದೂ ಕತ್ತಲೆ ಹರೆಯದಿದ್ದರೆ ಆ ಜ್ಯೋತಿಯ ಗೊಡವೆ ಏತಕಯ್ಯ? ಅಂಗದ ಮೇಲೆ ಚಿದ್ಘನಲಿಂಗವ ಧರಿಸಿದ್ದು ತನುಮನದ ಅವಗುಣ ಹಿಂಗದಿದ್ದರೆ ಆ ಲಿಂಗದ ಗೊಡವೆ ಏತಕಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನೀವು ಸೋಂಕಿಯೂ ಭವ ಹಿಂಗದಿದ್ದರೆ ನಿಮಗೆ ಕುಂದಯ್ಯ.