Index   ವಚನ - 497    Search  
 
ತನುವಿಡಿದು ಕಾಬುದು ಗುರುವಿನ ಭೇದ. ಮನವಿಡಿದು ಕಾಬುದು ಲಿಂಗದ ಭೇದ. ಜ್ಞಾನವಿಡಿದು ಕಾಬುದು ಜಂಗಮದ ಭೇದ. ಈ ತ್ರಿವಿಧವಿಡಿದು ಕಾಬುದು ಮಹಾಪ್ರಕಾಶ. ಆ ಮಹಾಪ್ರಕಾಶದೊಳಗೆ ಮಹವ ಕಂಡು ಮಹಕ್ಕೆ ಮಹನಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.