Index   ವಚನ - 576    Search  
 
ಏನುಯೇನೂ ಇಲ್ಲದ ಠಾವಿನಲ್ಲಿ ನಾನೀನೆಂಬುದು ಇದೇನು ಕಾರಣವೋ? ಇದು ನಿನ್ನ ವಿನೋದಾರ್ಥಕಾರಣವೆಂಬುದು ಮಾನವರಿಗೆ ತಿಳಿಯಬಾರದು ನೋಡಾ. ತಾ ಹುಟ್ಟಿದಲ್ಲಿಯೆ ಮೂರುಲೋಕ ಹುಟ್ಟಿತ್ತು. ತಾನಳಿದಲ್ಲಿಯೆ ಮೂರುಲೋಕವಳಿಯಿತ್ತು. ನಾ ನೀನೆಂಬುದಳಿದಲ್ಲಿಯೆ ನಿನ್ನ ನೆಲೆ ಸ್ವಯಂಭುವಾಯಿತ್ತು. ಸ್ವಯಂಭುವಳಿದು ಶೂನ್ಯವಾಯಿತ್ತು. ಮೂಲವಸ್ತುವೆಂದು ಬೇರುಂಟೆ ತಾನಲ್ಲದೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.