Index   ವಚನ - 16    Search  
 
ನಿರ್ವಯಲು ಸಾಮೀಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ ಸಕಲಸಾಮ್ರಾಜ್ಯವೆಂಬ ಶಿವಪುರವುಂಟು. ಆ ಪುರಕ್ಕೆ ವಜ್ರ ಮುತ್ತು ರತ್ನದಿಂದ ತೆತ್ತಿಸಿದ ಕೊತ್ತಳ. ಕೋಳು ಹೋಗದ ಮುಗಿಲಟ್ಟಣೆಯ ಪುರವನಾಳೆನೆಂಬುವರು. ಅಂದು ಆಗದು ಸರಸವಲ್ಲ. ಶಾಸ್ತ್ರದ ಕೊನೆಯ ಮೇಲಣ ಅವಧಾನದಂತೆ ತೋರಿಯಡಗುವ ವಿದ್ಯುಲ್ಲತೆಯಂತೆ ಬಯಲಲ್ಲಿ ಮೂಡುವ ಸುರಧನುವಿನಂತೆ ಮರೀಚಿಕದಂತೆ, ಕುಸುಮದ ನನೆಯಂತೆ [ದುಗ್ಧಘೃತ] ಮಿಶ್ರದಂತೆ ಮನದಲ್ಲಿಯೇ ವಾಸವಪ್ಪ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.