ವಜ್ರದ ಘಟ, ಸೂಜಿಯಲ್ಲಿ ಛಿದ್ರಿಸಿಕೊಂಬುದೆ ?
ಭದ್ರಗಜ, ಅಜಕುಲದಲ್ಲಿ ಗರ್ಜಿಸಿಕೊಂಬುದೆ ?
ನಿರ್ಧರದ ಭಟ, ಜೀವಗಳ್ಳನಲ್ಲಿ ಅದ್ದಲಿಸಿಕೊಂಬನೆ ?
ಇಂತೀ ನಿರ್ಧರವ ತಿಳಿದಲ್ಲಿ, ಸಕಲವಿಷಯ ರೋಗರುಜೆಗಳಲ್ಲಿ
ಮಿಕ್ಕಾದ ತಾಪತ್ರಯಂಗಳಲ್ಲಿ ಲಿಂಗಾಂಗಿ ಒಡಲಗೊಡುವನೆ?
ಇಂತಿವ ಕಂಡು ಮುಂಗಯ್ಯಾಭರಣಕ್ಕೆ ಮುಕುರದ ಹಂಗೇಕೆ ?
ತಾ ಕಂಡು ನೋಡಿದ ಮತ್ತೆ ಇನ್ನಾರುವ ಕೇಳಲೇತಕ್ಕೆ ?
ಇಂತಿವನರಿದು, ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ಹುಟ್ಟುಗೆಟ್ಟ.
Art
Manuscript
Music
Courtesy:
Transliteration
Vajrada ghaṭa, sūjiyalli chidrisikombude?
Bhadragaja, ajakuladalli garjisikombude?
Nirdharada bhaṭa, jīvagaḷḷanalli addalisikombane?
Intī nirdharava tiḷidalli, sakalaviṣaya rōgarujegaḷalli
mikkāda tāpatrayaṅgaḷalli liṅgāṅgi oḍalagoḍuvane?
Intiva kaṇḍu muṅgayyābharaṇakke mukurada haṅgēke?
Tā kaṇḍu nōḍida matte innāruva kēḷalētakke?
Intivanaridu, basavaṇṇapriya viśvakarmaṭakke
kāḷikāvimala rājēśvaraliṅgavu huṭṭugeṭṭa.