Index   ವಚನ - 19    Search  
 
ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ? ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ ಆ ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ. ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು ಅದುವೊಡಗೂಡಿ ಎಯ್ದುವಂತೆ ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ, ಅರಿಕೆ ಅಂಬಿಗನಾಗಿ ಸಂಸಾರ ಸಾಗರವ ದಾಂಟಿ, ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.