ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ.
ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು.
ಒಂದ ಬಿಟ್ಟೊಂದ ಹಿಡಿವುದಕ್ಕೆ ಎಡೆತೆರಪಿಲ್ಲ.
ಇದು ಕಾರಣದಲ್ಲಿ, ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು.
ನಿಂದ ಇರವಿನಲ್ಲಿ ಸಂದು,
ಮತ್ತೊಂದು ವಿಚಾರಿಸಿಹೆನೆಂಬ ಸಂದೇಹವಳಿದಲ್ಲಿ
ತೋರುತ್ತದೆ ಬೆಳಗು ಸದಾಶಿವಮೂರ್ತಿಲಿಂಗದಲ್ಲಿ.