Index   ವಚನ - 52    Search  
 
ದೀಕ್ಷಾಗುರುವಾದಲ್ಲಿ ತ್ರಿವಿಧದ ಆಸೆಯಿಲ್ಲದಿರಬೇಕು. ಶಿಕ್ಷಾಗುರುವಾದಲ್ಲಿ ಅರಿಗಳಿಗಂಜದೆ ಪ್ರಾಣತ್ಯಾಗನಿಶ್ಚಯನಾಗಿರಬೇಕು. ಮೋಕ್ಷಗುರುವಾದಲ್ಲಿ ಸರ್ವದೋಷ ಸರ್ವೇಂದ್ರಿಯ ನಾಶನಾಗಿರಬೇಕು. ಇಂತೀ ಮೂರು ಮೀರಿ ಬೇರೊಂದರಲ್ಲಿ ನಿಂದು ತ್ಯಾಗಾಂಗ ಭೋಗಾಂಗ ಯೋಗಾಂಗ ತ್ರಿವಿಧಲೇಪವಾಗಿ ನಿಂದುದು ನಿಜಗುರುಸ್ಥಲ. ಆ ಗುರುವಿನ ಕೈಯ ಅನುಜ್ಞೆ ಪರಂಜ್ಯೋತಿ ಪ್ರಕಾಶ. ಅದು ನಿರವಯತತ್ವ, ಸದಾಶಿವಮೂರ್ತಿಲಿಂಗವು ತಾನೆ.