ತನುಸಂಬಂಧ ಬ್ರಹ್ಮನ ತೊಡಕಾದಲ್ಲಿ,
ವಿಕಾರಸಂಬಂಧ ವಿಷ್ಣುವಿನ ತೊಡಕಾದಲ್ಲಿ,
ಜೀವಸಂಬಂಧ ರುದ್ರನ ತೊಡಕಾದಲ್ಲಿ,
ಇಂತೀ ಮೂರ ಹಿಂಗುವ ಹಿರಿಯರ ಆರನೂ ಕಾಣೆ.
ಇಂತೀ ತ್ರಿವಿಧಕ್ಕೆ ಹೊರಗಾದಲ್ಲಿ ಮೀರಿ
ಕಾಬ ತೆರ ಸಮಯಕ್ಕೆ ಹೊರಗು,
ಸದಾಶಿವಮೂರ್ತಿಲಿಂಗವೆ ಅಂಗವಾದವನ ಇರವು.
Art
Manuscript
Music
Courtesy:
Transliteration
Tanusambandha brahmana toḍakādalli,
vikārasambandha viṣṇuvina toḍakādalli,
jīvasambandha rudrana toḍakādalli,
intī mūra hiṅguva hiriyara āranū kāṇe.
Intī trividhakke horagādalli mīri
kāba tera samayakke horagu,
sadāśivamūrtiliṅgave aṅgavādavana iravu.